Homeசிறுகதைகள்கண்ணாடிப்பந்து : கன்னட மொழிபெயர்ப்பு

கண்ணாடிப்பந்து : கன்னட மொழிபெயர்ப்பு

 

ಗಾಜಿನ ಚೆಂಡು

ತಮಿಳಿನಲ್ಲಿ: ನರಸಿಂ                                                                                      ಕನ್ನಡಕ್ಕೆ: ಕೆ. ನಲ್ಲತಂಬಿ

ಲೈಫ್… ನಮ್ಮೆಲ್ಲರಿಗೂ ಮೂರು ಚೆಂಡುಗಳನ್ನು ಕೊಟ್ಟಿದೆ. ಅದರಲ್ಲಿ ಎರಡು ರಬ್ಬರ್ ಚೆಂಡುಗಳು.
ಒಂದು … ಗಾಜಿನ ಚೆಂಡು.
You know what all?”

ನಾನು ಪ್ರತಿ ತಿಂಗಳಿನ  ಬ್ರಾಂಚ್
ಮೀಟಿಂಗನ್ನು ಉತ್ಸಾಹದಿಂದಲೂ ಗಂಭೀರವಾಗಿಯೂ ನಡೆಸುವಾಗಲೆಲ್ಲಾ
, ಕೆಲಸಮಾಡುವವವರು ತುಂಬಾ ಕುತೂಹಲದಿಂದ
ಭಾಗವಹಿಸುತ್ತಾರೆ ಅಥವಾ ನಾನು ಭಾಗವಹಿಸುವಂತೆ  ಮಾಡುತ್ತೇನೆ.
ನಾನು ಪುಸ್ತಕಗಳಿಂದ ಓದಿದ
, ಅವಧಾನಿಸಿದ,
ನನ್ನ ಬಾಸಿನಿಂದ ಕಲಿತುಕೊಂಡ ….ಕೆಲವನ್ನು ಬೆರಸಿ ಅವರಿಗೆ ಹೇಳಿ
, ಮೋಟಿವೇಟ್
ಮಾಡುವುದರಲ್ಲಿ ನಿಸ್ಸೀಮನೆಂದು ಹೆಸರುಗಳಿಸಿರುವೆ.

ಆ ಮೂರು ಚೆಂಡುಗಳು ಯಾವುದು?’ ಎಂಬಂತೆ ಹುಬ್ಬು
ಹಾಯಿಸಿದೆ…ನನ್ನ ಎದುರು ಕುಳಿತು ನನ್ನನ್ನೇ ನೋಡುತ್ತಿದ್ದ ರಮ್ಯಳ ಬಳಿ ಅಂದರೆ
, ರಮ್ಯಾ ಕ್ರಿಸ್ಟಫರ್.

ಸಂಸ್ಥೆಯ ಪ್ರಮುಖ ಕಾರ್ಯಾಲಯಗಳು  ಮುಂಬೈ ಮತ್ತು
ದೆಹಲಿಯಲ್ಲಿ ಇರುವುದರಿಂದ
,
ಇ-ಮೇಲ್ ಸೃಷ್ಟಿಮಾಡಲು ಸರ್ ನೇಮ್ ಎಂಬ ಜಾತಿಯ ಹೆಸರನ್ನು ಕೇಳಿ ತಿಳಿದುಕೊಳ್ಳುವರು. ಅವರ ಬೇಳೆ
ತಮಿಳುನಾಡಿನಲ್ಲಿ ಬೇಯುವುದಿಲ್ಲವಾದ್ದರಿಂದ
, ಅಪ್ಪನ ಹೆಸರನ್ನು ಇ-ಮೇಲ್
ನಲ್ಲಿ ಹೆಸರಿನ ಹಿಂದೆ ಸೇರಿಸಿಬಿಡುತ್ತಾರೆ.

ರಮ್ಯಳನ್ನು ನೋಡಿ ನಾನು ಕೇಳುತ್ತಿದ್ದೇನೆ ಎಂದು ಅರಿತುಕೊಳ್ಳಲು, ಅವಳಿಗೆ ಸ್ವಲ್ಪ ಸಮಯ ಹಿಡಿಯಿತು. ಯಾವುದೋ
ಲೋಕದಲ್ಲಿದ್ದವಳು ಚೇತರಿಸಿಕೊಂಡು. “ಎಕ್ಸ್ ಕ್ಯೂಸ್ಮೀ ಬಾಸ್” ಎಂದಳು.

ಪ್ರಶ್ನೆಯನ್ನು ಮತ್ತೆ ಅವಳ ಬಳಿ ಕೇಳಿ “Hope you are here?” ಎಂದಾಗ ಅವಳು ಗಾಬರಿಯಿಂದ ನನ್ನನ್ನು ನೋಡಲು, ನಾನು ನನ್ನ
ಬಲಗಡೆ ಕುಳಿತಿದ್ದ ಗುಣಾನನ್ನು ಕೇಳಿದೆ. ಅವನು ಚಟ್ಟೆಂದು ನನ್ನ ಕಣ್ಣು ತಪ್ಪಿಸಿ ತಲೆ
ತಗ್ಗಿಸಿಕೊಂಡ.

ಇದು ಒಂದು ಬಗೆಯ ಯುಕ್ತಿ. ಗುಂಪಿನ ಗಮನ ನಮ್ಮ ಮೇಲೆ ಇರಬೇಕೆಂದು ಪ್ರಶ್ನೆಗಳನ್ನು ಕೇಳಿ, ಅವರನ್ನು ನಮ್ಮ ಕಡೆ ಸೆಳೆಯುವುದು.

“ಗಾಜಿನ ಚೆಂಡು ಎಂಬುದು ನಮ್ಮ ಮನೆ, ಪ್ರೇಯಸಿ, ಹೆಂಡತಿ, ಮಕ್ಕಳು
ಮತ್ತು ಹೆತ್ತವರು. ಉಳಿದೆರಡು ರಬ್ಬರ್ ಚೆಂಡುಗಳು… ಕೆಲಸ ಮತ್ತು ಗೆಳೆಯರು.

ಒಪ್ಪಿಕೊಂಡವರಂತೆ ತಲೆ ಎತ್ತಿದರು.

“ನ್ಯಾಯವಾಗಿ ಈ ಮೂರು ಚೆಂಡುಗಳನ್ನು ನಾವು ಹೇಗೆ ನಿಭಾಯಿಸಬೇಕು ಗೊತ್ತೇ? ಬಲಗೈಯಲ್ಲಿ ಗಾಜಿನ ಚೆಂಡನ್ನು ಗಟ್ಟಿಯಾಗಿ
ಹಿಡಿದುಕೊಳ್ಳಬೇಕು
; ಎಡಗೈಯಲ್ಲಿ ಒಂದು ರಬ್ಬರ್ ಚೆಂಡು. ಮತ್ತೊಂದು
ರಬ್ಬರ್ ಚೆಂಡನ್ನು ಈ ಎರಡರ ಮೇಲೆ ಹೊಟ್ಟೆಯ ಮುಂದೆ ಇಟ್ಟು ಬ್ಯಾಲನ್ಸ್ ಮಾಡಬೇಕು
! ಅಂದರೆ
ಹೀಗೆ”

ಹೌದು ಎಂದು ತಲೆದೂಗಿದರು.

“ಆದರೇ,
ನಾವು ಏನು ಮಾಡುತ್ತೇವೆ
? ಎರಡು ರಬ್ಬರ್ ಚೆಂಡುಗಳನ್ನು ಕೈಯಲ್ಲಿ
ಬಿಗಿಯಾಗಿ ಹಿಡಿದುಕೊಂಡು
, ಗಾಜಿನ ಚೆಂಡನ್ನು ಮೇಲುಗಡೆ ಇಟ್ಟು
ಬ್ಯಾಲನ್ಸ್ ಮಾಡುತ್ತೇವೆ. ರಬ್ಬರ್ ಚೆಂಡು ಕೆಳಗೆ ಬಿದ್ದರೆ ಪುಟಿದು ಮೇಲೆ ಬರುತ್ತದೆ. ಸ್ವಲ್ಪ
ತಡವಾಗಿಯಾದರೂ  ಬರಬಹುದು. ಆದರೆ
ಒಡೆದುಹೋಗುವುದಿಲ್ಲ.  ಕೆಲಸ ಹೋದರೆ ಬೇರೆ ಕೆಲಸ
ಸಿಗಬಹುದು. ಚೆಂಡು ಮೇಲೆ ಬರುತ್ತೆ. ಫ್ರೆಂಡ್ಸ್ ಹೋದರೂ ಮತ್ತೆ ಬರುತ್ತಾರೆ. ಬಾರದಿದ್ದರೂ
ಪರವಾಗಿಲ್ಲ
, ಚೆಂಡು ಒಡೆಯೋದಿಲ್ಲ. ಆದರೂ,
ಎರಡೂ ರಬ್ಬರ್ ಚೆಂಡುಗಳನ್ನು ಬೆಳಗ್ಗೆಯಿಂದ ರಾತ್ರಿಯವರೆಗೆ ಬಿಗಿಯಾಗಿ ಹಿಡಿದುಕೊಂಡೇ
ಇರುತ್ತೇವೆ. ಒಡೆದು ಹೋಗೋ ಗಾಜಿನ ಚೆಂಡನ್ನು ಹಾಗೆಯೇ ಬಿಟ್ಟುಬಿಡುತ್ತೇವೆ. ಪ್ರಾಣ ಕೊಡೋ
ಪ್ರೇಯಸಿ ಕಾಲ್ ಮಾಡಿದರೆ ಕಟ್ ಮಾಡ್ತೀವಿ
; ಮನೆಯಿಂದ ಫೋನ್ ಬಂದರೆ
ಸೈಲಂಟ್ ಮೋಡಿಗೆ ಹಾಕ್ತೀವಿ
, ಇಲ್ಲ ಕೆಲಸದಲ್ಲಿ
ಬಿಸಿ ಅಂತ ಅರಚ್ತೇವೆ.
Am I right? “

ಯಾರೂ ಉತ್ತರ ಹೇಳಲಿಲ್ಲ. ಆದರೆ ಎಲ್ಲರ ಕಣ್ಣುಗಳೂ ಒಪ್ಪಿಕೊಂಡವು. ಇನ್ನು ಮುಂದೆ ಮನೆಗೆ
ಪ್ರಾಮುಖ್ಯತೆ ಕೊಡಬೇಕು ಎಂಬಂತೆ ಸೆಟೆದು ಕುಳಿತು ತನ್ನಷ್ಟಕ್ಕೆ ತಾನೇ ತಲೆಯಾಡಿಸಿದ ಬಾಬು.


“ಹಾಗೆಂದು ಮೀಟಿಂಗಿನ ಮಧ್ಯೆ ಎದ್ದು ಅಮ್ಮನನ್ನು ನೋಡಲು ಹೊರಟು ಬಿಡಬೇಡ
ಕಣಯ್ಯಾ  ಬಾಬು” ಎಂದು ನಾನು ಹೇಳಿದಾಗ
ಅಲ್ಲಿ ನಗುವಿನ ಅಲೆ ಎದ್ದಿತು.

ಅನಂತರ, ಸ್ವಲ್ಪ
ಸ್ವಲ್ಪವಾಗಿ ಕಂಪನಿಯ ಈ ವರ್ಷದ ಬೇಡಿಕೆಗಳು
, ಅದನ್ನು ಹೇಗೆ ಯೋಜಿಸಿ
ಕಾರ್ಯಗತ ಗೊಳಿಸಬೇಕು ಎಂದು ನಾನು ಹೇಳಿ ಮುಗಿಸಿದಮೇಲೆ
, ಜಾಕ್ಕಿ ಚಾನ್
ಚಿತ್ರವನ್ನು ನೋಡಿ ಥ್ಯೇಟರಿನಿಂದ ಹೊರಗೆ ಬರುವಾಗ ಸೈಕಲ್ ಸ್ಟಾಂಡಿನಲ್ಲಿ ಸಾಹಸ ಮಾಡುವ ಎಳೆಯ
ಹುಡುಗರಂತೆ ಉತ್ಸಾಹ ಮತ್ತು ನಂಬಿಕೆಯಿಂದ ನಿರ್ಗಮಿಸಿದರು.

“ವಾಟ್ ರಮ್ಯ…ಮೀಟಿಂಗ್ ಬೋರ್ ಹೊಡೆಯಿತೇ? ಯೂ ವೆರ್ ಇನ್ ಸಂ ಅದರ್ ವರ್ಲ್ಡ್?
ಹಬೆ ಹಾರುವ ಕಾಫಿಯನ್ನು ಕಪ್ಪಿಗೆ ತುಂಬಿಕೊಳ್ಳುತ್ತ ನಾನು ಕೇಳಿದಾಗ
,
“ಅಯ್ಯೋ….ಹೀಗೆ ಸಿಕ್ಕಿಹಾಕಿಕೊಂಡನಲ್ಲಾ!” ಎಂಬಂತೆ ಮುಖ ಮಾಡಿ ನಗುತ್ತಾ
…”ಬಾಸ್ ಐ ವಾಸ್ ಲುಕಿಂಗ್ ಅಟ್ ಯೂ” ಎಂದಳು.

ನನಗೆ ಎಲ್ಲ ಅರ್ಥವಾದರೂ, ತಿಳಿಯದಂತೆ ಕೇಳಿದೆ.

“ಮತ್ತೆ ಯಾಕೆ ಉತ್ತರ ಹೇಳದೇ ಕಣ್ ಕಣ್ ಬಿಡ್ತಿದ್ದೆ?”

ಅದೇ ಹೇಳಿದನಲ್ಲಾ …ನಿಮ್ಮನ್ನೇ ನೋಡ್ತಾ ಇದ್ದೇ ಅಂತ’, ಎಂಥಾ ಸ್ಟೈಲಿಶ್ ಸ್ಪೀಚ್!”

“ಇದಕ್ಕೆ ನಾನು ನಕ್ಕರೆ…ಲೈಟಾಗಿ ಹತ್ತಿಸಿದಕ್ಕೇ ಜೊಲ್ಸುರೀತಿದಾನಲ್ಲಪ್ಪಾ ಅಂತ
ಫ್ರೆಂಡ್ಸ್ ಹತ್ರ ಹೇಳ್ತೀಯಾ. ಉತ್ತರ ಹೇಳ್ದಿದ್ರೆ
, ಜಂಬ ಅಂತ
ಅಂದುಕೋತೀಯ. ಬೆಟರ್ ಅಂದರೆ ಕಾಫಿ ಕುಡಿಯೋತರ ಬಿಜಿಯಾಗಿರೋದು.”

ನಾನು ಹೀಗೆ ಹೇಳಿ ನಗುತ್ತಾ ಅಲ್ಲಿಂದ ಜಾರಿಕೊಳ್ಳುವುದನ್ನು ರಸಿಕತೆಯಿಂದ ನೋಡುತ್ತಾಳೆ
ಎಂಬುದನ್ನು ಅರ್ಥ ಮಾಡಿಕೊಂಡದ್ದರಿಂದ ಸ್ವಲ್ಪ ತೇಲುತ್ತಾ ನಡೆದೆ.

ರಮ್ಯ ಕ್ರಿಸ್ಟಫರ್, ನಮ್ಮ
ಕಾರ್ಯಾಲಕ್ಕೆ ಸೇರಿ ಮೂರುನಾಲ್ಕು ತಿಂಗಳಾಯಿತು. ಖುದ್ದಾಗಿ ರಿಪೋರ್ಟ್ ಮಾಡುವ ಕೆಲಸವಾದ್ದರಿಂದ
, ನಮ್ಮಿಬ್ಬರ ನಡುವೆ  ಮಾತನಾಡಬೇಕಾದ ಬಹಳ
ಅವಕಾಶಗಳು ಇರುತ್ತಿದ್ದವು. ಕಪ್ಪು ಹಲವು ಬಗೆ ಇದ್ದರೂ
, ಎಲ್ಲಾ ಕಪ್ಪೂ
ಆಕರ್ಷಣೀಯವೇ ಎಂಬುದು ನನ್ನ ಭಾವನೆ. ರಮ್ಯ ಸೊಗಸಾದ ಕಪ್ಪು. ಅವಳ ಬಣ್ಣಕ್ಕೆ ತಕ್ಕ ಉಡುಪಿನ ಆಯ್ಕೆ
, ಅವಳನ್ನು ಮತ್ತಷ್ಟು ಮೋಹಕವಾಗಿ ತೋರಿಸುತ್ತಿತ್ತು. ಬೇರೆಯ ಡಿಪಾರ್ಟ್ಮೆಂಟಿನವರೂ ಸಹಾ
ಯಾವುದಾದರೂ ನೆಪಹೂಡಿಕೊಂಡು ಅವಳಿರುವ ಜಾಗದ ಸುತ್ತಮುತ್ತ ಸುಳಿದಾಡುತ್ತಿರುವರು.

ಚೆಂಡಿನ ಕತೆಯಂತೆ,
ಮೊದಲ ತಿಂಗಳ ಮೀಟಿಂಗಿನಲ್ಲಿ ನಾನು ಹೇಳಿದ ಕೋತಿಯ ಕತೆಯಿಂದ ಇಂಪ್ರೆಸ್ ಆಗಿ ನನ್ನ ಬಳಿ ಬಂದು
, “ಮಸ್ತ್ ಬಾಸ್ಸ್!” ಎಂದಳು. “ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಬಹಳ ಹಿಡಿಸಿದೆ” ಎಂದು
ಹೋದ ತಿಂಗಳು ಯಾವುದೋ ಒಂದು ಸಂದರ್ಭದಲ್ಲಿ ಹೇಳಿದ್ದಳು.

ನನಗೆ ಮದುವೆ ಆಗಿಲ್ಲ ಎಂಬುದನ್ನು, ಒಬ್ಬ ನುರಿತ ಗೂಡಚಾರಿಯಂತೆ ಹಲವು ಬಗೆಯ ಉಪಪ್ರಶ್ನೆಗಳನ್ನು ಸಹೋದ್ಯೋಗಿಗಳಿಂದ ಕೇಳಿ
ತಿಳಿದುಕೊಂಡಿದ್ದಾಳೆ. ಕೆಲವು ಪ್ರಶ್ನೆಗಳನ್ನು ನೇರವಾಗಿ ಕೇಳದೇ ಇರುವುದರಲ್ಲಿರುವ  ಸಾಮರ್ಥ್ಯ ಅದ್ಬುತವಾದದ್ದು. ಹಾಗೆ
, ನನಗೇ ಕ್ರಿಸ್ಟಫರ್ ಯಾರೆಂದು ತಿಳಿದುಕೊಳ್ಳುವ ಕುತೂಹಲ ಹುಟ್ಟಿ, ಇಂಟರ್ವ್ಯೂಗೆ ಅವಳು ಬಂದಿದ್ದಾಗ ಕೊಟ್ಟ ಬಯೋಡೇಟಾವನ್ನು ಹುಡಿಕಿ ತೆಗೆದು, ಅಪ್ಪನ ಹೆಸರು ಕ್ರಿಸ್ಟಫರ್ ಎಂಬುದನ್ನು ಖಚಿತಪಡಿಸಿಕೊಂಡಾಗ.

“ರಮ್ಯ, ನಾಳೆ EOD –ಗೆ ಲಾಸ್ಟ್ ಇಯರ್ ನಂಬರ್ಸ್ ಎಲ್ಲಾ ನನಗೆ ಬೇಕು. ಐ ಹೇವ್ ಟು ಪ್ರೆಸೆಂಟ್ ಇಟ್”

ನಾನು ಹೇಳುತ್ತಿರುವಾಗಲೇ ನಗುತ್ತಿದ್ದಳು.

“ಏನಾಯ್ತು?”

“ನೀವು ನಿನ್ನೆ ಹೆಡ್ ಆಫೀಸಿಗೆ ಕಾಲ್ ಮಾಡಿ ಮಾತನಾಡುತ್ತಿರುವಾಗಲೇ ನೋಟ್ ಮಾಡಿದೆ.
ನಿನ್ನೇನೇ ರೆಡಿ ಮಾಡಿಟ್ಟಿದ್ದೀನಿ. ಈಗ ಮೆಯಿಲ್ ಮಾಡ್ತೀನಿ ಬಾಸ್.”

ನನ್ನಿಂದ ಮೆಚ್ಚುಗೆ ಬರುತ್ತದೆಂದು ಅಂದುಕೊಂಡಳು.

“ಅಂದ್ರೆ…ನಾನು ಮಾತಾಡೋದನ್ನ ಕದ್ದು ಕೇಳಿದ್ದೀಯಾ! ಬೇಡ್, ವೆರಿ ಬೇಡ್” ಎಂದು, ಸ್ವಲ್ಪ ಸೀರಿಯಸ್ ಆಗಿ ಇರುವಂತೆ ನಟಿಸಿದೆ.

ಅಷ್ಟೇ, ರಮ್ಯಳ
ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ಅವಳಿಂದ ಆ ಪರಿಸ್ಥಿತಿಯನ್ನು ನಿಭಾಯಿಸಲು ಆಗಲಿಲ್ಲ.

ನಾನು ಜೋರಾಗಿ ನಕ್ಕು, ಜಸ್ಟ್ ಕಿಡ್ಡಿಂಗ್” ಎಂದಾಗಲೇ ಅವಳ ಮುಖದಲ್ಲಿ ನೆಮ್ಮದಿ. ಆದರೂ, ತಲೆಯನ್ನು ಎಡ ಬಲಕ್ಕೆ ಒಮ್ಮೆ ಆಡಿಸಿ ಅಲ್ಲಿಂದ ಹೊರಟುಹೋದಳು.

ಮೊಬೈಲ್, ಆಫೀಸ್ ಮೆಯಿಲ್, ಫೋನ್ ರಿಸೀವರ್ ಎಂದು ಕೈಗಳು ಅನಿಚ್ಛೆಯಾಗಿ ಚಟುವಟಿಕೆಗಳಲ್ಲಿ ಇದ್ದರೂ, ಮನಸ್ಸು ಅವಳ ಕಣ್ಣು ಒದ್ದೆಯಾದದ್ದರಿಂದ ಹೊರಬರಲಿಲ್ಲ. ಕೇಬಿನಿನಿಂದ ಮೆಲ್ಲಗೆ ಹೊರ
ಬಂದು
, ಅವಳ ಜಾಗಕ್ಕೆ ಹೋಗಿ ಜೇಬಿನೊಳಗೆ ಕೈ ತೂರಿಸಿಕೊಂಡು ಸ್ಟೈಲಾಗಿ
ಅವಳ ಹಿಂದೆ ನಿಂತುಕೊಂಡೆ.

ನನ್ನ ಕಡೆ ತಿರುಗಿ ನೋಡದಲೇ, “ಫೈವ್ ಮಿನಿಟ್ಸ್ ಮೆಯಿಲ್ ವಿಲ್ ಬಿ ಸೆಂಟ್ ಬಾಸ್ “ ಎಂದಳು.

ನನಗೆ ನೂಡಲ್ಸಿನಷ್ಟು ಗೋಜಲಾದ ಮನಸ್ಥಿತಿ. ಕಿಚಾಯಿಸಲು ಹೋಗಿ ಓವರ್ ಡೋಸಾಯಿತು.
ಅದಕ್ಕಾಗಿ ನನಗೆ  ತಗ್ಗಿ ನಡೆದಳೇನೋ. ಏನೋ ಒಂದು
ಅಡ್ಡಿಯಾದಂತಿತ್ತು. ಈಗೋ ಎಲ್ಲಾ ಅಲ್ಲ
, ಏನೋ ಒಂದು. ಬಹುಶಃ ಅದೇ ಈಗೋನಾ?

ದಟ್ಸ್ ಓಕೆ. ಹೌದು…ಜಾಯನ್ ಆಗಿ ಇಷ್ಟು ದಿನ ಆಯ್ತು ಟ್ರೀಟ್ ಏನೂ ಇಲ್ವಾ?

ಅವಳಿಗೆ ಅರ್ಥವಾಯಿತು ನಾನು ಇಳಿದುಬರುತ್ತಿದ್ದೇನೆ ಎಂದು. ತಿರುಗಿ, ತಲೆ ಎತ್ತಿದಳು.

“ಸಾಮಾನ್ಯವಾಗಿ,
ಹೊಸದಾಗಿ ಬರೋರನ್ನಲ್ಲವೇ ವೆಲ್ಕಮ್ ಮಾಡೋದು… ಅದೇತಾನೇ ಕಾರ್ಪರೇಟ್ ಕಲ್ಚರ್.
?” ಅವಳ ದನಿಯಲ್ಲಿ ಯಾವಾಗಲೂ ಇರುವ ಉತ್ಸಾಹ ಇರಲಿಲ್ಲ.

ಛೇ, ಪಾಪ ನೋಯಿಸಿಬಿಟ್ಟೆ
ಎಂದನಿಸಿತು. ಎಷ್ಟೊಂದು ಸಾವಿರ ಮನುಷ್ಯರನ್ನು ನಮ್ಮ ಕಣ್ಣು ನೋಡಿರುತ್ತವೆ. ಆದರೆ
,  ಕೆಲವೇ ಮನುಷ್ಯರ ಚಿತ್ರಗಳನ್ನು ಮಾತ್ರ
 ತನ್ನೊಳಗೆ ಸೆರೆಹಿಡಿದು ಇಟ್ಟುಕೊಳ್ಳುತ್ತದೆ.
ಕೇವಲ ಕೆಲವು ಸಂಗತಿಗಳು ಮಾತ್ರ ಮನಸ್ಸಿಂದ ಚಟ್ಟೆಂದು ಹೋಗುವುದಿಲ್ಲ. ದರದರ ಎಂದು
ಎಳೆದುಕೊಂಡುಹೋಗಿ ನಿಲ್ಲಿಸಿಬಿಡುತ್ತದೆ. ಹಾಗೆ ನನ್ನ ಮನಸ್ಸನ್ನು ಸೆಳೆದು ಎಳೆದು ಹೋಗಿ ರಮ್ಯಳ
ಮುಂದೆ
, ಇಲ್ಲಾ…ಇಲ್ಲ ಹಿಂದೆ ಹೀಗೆ ನಿಲ್ಲಿಸಿದೆ. ಇವಳನ್ನು ಸಹಜಸ್ಥಿತಿಗೆ
ತರಬೇಕೆಂಬುದೇ ಈ ಕ್ಷಣ ನನ್ನ ಮನಸ್ಸಿನಲ್ಲಿದ್ದ ಹೊಯ್ದಾಟ!

“ಓ ಯೆಸ್…ಹೇಳು. ಏನು ಟ್ರೀಟ್ ಬೇಕು? ಯೂ ನೇಮ್ ಇಟ್, ಯೂ ಹೇವ್ ಇಟ್.”

ಅವಳು ಎಂದಿನಂತೆ ಉತ್ಸಾಹದ ನಗೆ ಬೀರಿದಳು.

“ಶ್ ಅಪ್ಪಾ…ನಾರ್ಮಲ್ ಆಗೇ ನೀವು ಹೀಗೇನಾ ಮಾತಾಡೋದು? ನಿಮ್ಮ ವರ್ಡಿಂಗ್ಸನ್ನೆಲ್ಲಾ ಮನೆಗೆ ಹೋದಮೇಲೆ
ಒಂದು ಸಲ ಮೆಲುಕು ಹಾಕಬೇಕೆನಿಸುತ್ತೆ. ಯೂ ನೇಮ್ ಇಟ್
, ಯೂ ಹೇವ್ ಇಟ್.
ಸೂಪ್ಪರಲ್ಲಾ!”

ಅವಳ ಬಳಿ ಇದೇ ಸಮಸ್ಯೆ. ಪಟ್ಟೆಂದು ಮುಖದ ಎದುರಿನಲ್ಲೇ ಮೆಚ್ಚುಗೆ ಸೂಚಿಸಿಬಿಡುತ್ತಾಳೆ.
ನಿಜವಾಗಲೂ ಅದು ಮುಖಸ್ತುತಿ ಅಲ್ಲ.  ಎಷ್ಟೇ
ವಾಟ್ಸ್ಅಪ್
, ಫೇಸ್ ಬುಕ್ ಯುಗಗಳು
ಕಳೆದರೂ
, ಹೆಣ್ಣಿನ ಮನಸ್ಸು ಹೀಗೆಯೇ ವರ್ತಿಸುವುದೇನೋ. ಆದರೆ
ಇವನ್ನೆಲ್ಲಾ  ಅರ್ಥಮಾಡಿಕೊಳ್ಳಲು ಅಥವಾ
ಅರಿತುಕೊಳ್ಳಲೂ ಯಾವ ಆಪ್
, ಗೇಜೆಟ್ಗಳಿಗೂ ಅಸಾಧ್ಯ. . ಇವನ್ನೆಲ್ಲಾ
ಯೋಚಿಸುತ್ತಾ ಗೊಂದಲದಿಂದ ನಿಂತಿದ್ದೆ.

ನಮ್ಮನ್ನು ಯಾರೋ ಒಬ್ಬ ಮೇಲಿಂದ ದುರುಗುಟ್ಟಿಕೊಂಡು ನೋಡುತ್ತಿದ್ದಾನೇ ಎಂಬುದನ್ನು
ತಿಳಿಸಿಕೊಡುವ ತಾಕತ್ತು ಬದುಕಿಗಿದೆ. ಇಲ್ಲದಿದ್ದರೆ ಇಷ್ಟೊಂದು ವರ್ಷಗಳಲ್ಲಿ ಇಲ್ಲದೆ ಇಂದು
ಬೆಳಗ್ಗೆ ಮಾನವ ಸಂಪನ್ಮೂಲ ಇಲಾಖೆಯಿಂದ ಭಾರತದ ಎಲ್ಲ ಕಾರ್ಪೊರೇಟ್ ಕಂಪೆನಿಗಳಿಗೆ ಹೀಗೊಂದು
ಮೆಯಿಲನ್ನು ಕಳುಹಿಸುವರೇ! ಕಾರ್ಯಾಲಯದಲ್ಲಿ ಮಾಡಬಹುದಾದವು…ಮಾಡಕೂಡದವು ಎಂಬ ವಿವರವನ್ನು.
ತಿಳಿದು ನಡೆದುಕೊಳ್ಳಬೇಕಾದ ರೀತಿಯ ಬಗ್ಗೆಯೇ ನಾಲ್ಕೈದು ಪಾಯಂಟುಗಳು. ಮಹಿಳೆಯರೊಂದಿಗೆ
ನಡೆದುಕೊಳ್ಳಬೇಕಾದ ರೀತಿ-ನೀತಿಯ ಬಗೆಗೇ ಒಂದು ಬಾಷ್ಯ!

ಏನಾದರೂ ಒಂದು ಪದ ಸಹಾ ಹೆಚ್ಚು ಕಡಿಮೆ ಮಾತನಾಡಿ ಅದೇ ಸಮಸ್ಯೆ ಆದರೆ ಎದುರಿಸುವುದು ಬಹಳ
ಕಷ್ಟ. ನಮ್ಮ ಕಾರ್ಯಾಲಯದ ಗಂಡಸರ ಸಂಸ್ಕೃತಿ ಏನೆಂದರೆ
, ಎಲ್ಲರೂ ಯಾವುದಾದರೂ ಹೆಣ್ಣಿನೊಂದಿಗೆ ಲಂಚಿಗೆ ಹೋಗಲು,
ಎಲ್ಲಾದರೂ ಹೊರಗೆ ಹೋಗಲು ತವಕಿಸುತ್ತಾರೆ. ಆದರೇ
, ಯಾರಾದರೂ ಹಾಗೆ
ಜತೆಯಾಗಿ ಹೋದರೆ ಆ ಕ್ಷಣವೇ ಶ್ರೀ ರಾಮಚಂದ್ರ ಮೂರ್ತಿಯ ಅವತಾರ ತಾಳಿ
, ವಾಟ್ ದ ಹೆಲ್ ಹೇಪ್ಪನಿಂಗ್  ಯಾ?’ ಎಂದು ಗುಸಗುಸು ಮಾಡಿ ತಾವು  ಸಾಚಾ
ಆಗಿಬಿಡುತ್ತಾರೆ.

ಎರಡು ದಿನಗಳ ಹಿಂದೆ, ನಾನು ಬಹಳ ತಡವಾಗಿ ಆಫೀಸಿಗೆ ಬರಬೇಕಾಯಿತು. ಆ ಸಮಯದಲ್ಲಿ ರಮ್ಯ ಎರಡು ಸಲ ಕರೆಮಾಡಿ,  ಪುಡಿಗಾಸಿಗೂ ಬಾರದ ಯಾವುದೋ ಸಂದೇಹಗಳನ್ನು
ಕೇಳಿದಳು. ಮೂರನೇಯ ಸಲ “ಆಫೀಸಿಗೆ ಬರ್ತೀರಾ
?” ಎಂದಳು. “ಬರಲ್ಲಾ” ಎಂದು
ನಾನು ಹೇಳಿಕೊಂಡೇ ಅವಳ ಪಕ್ಕದಲ್ಲಿ ಹಾದುಹೋಗುವುದನ್ನು ನೋಡಿ
,
ಹುಸಿಗೋಪದ ನಗುವಿನೊಂದಿಗೆ ಫೋನನ್ನು ಇಟ್ಟಳು.

“ಏನಾಯ್ತು… ನನ್ನನ್ನು ಮಿಸ್ ಮಾಡಿದೆಯಾ?”

ಅವಳು ಕಕ್ಕಾಬಿಕ್ಕಿಯಾಗುವುದನ್ನು ಒಳೊಳಗೆ ಆನಂದಿಸುತ್ತಾ, ಚಪ್ಪಲಿ ಕಳಚ್ಲಾ!’
ಎಂದು ಹೇಳಿಬಿಡುವಳೋ ಎಂಬ ಭಯದಿಂದ ಕಳೆದರೂ, ಅದನಂತರ
ಬೇಕಂತಲೇ ಕೆಲವು  ಅಫಿಶಿಯಲ್ ಪ್ರಶ್ನೆಗಳನ್ನು
ಕೇಳಿ
, ನನ್ನ ಮೊದಲ ಪ್ರಶ್ನೆಯನ್ನು ಸಹಜವಾಗಿ ತೆಗೆದುಕೊಂಡಳು
ಎಂಬುದನ್ನೂ ಖಚಿತಪಡಿಸಿಕೊಂಡಾಗಲೇ ಸಮಾಧಾನವಾಯಿತು.

ನಾನು ಯೋಚಿಸುತ್ತಿರುವಾಗಲೇ, ಬೇಕಂತಲೇ ನನ್ನ ಹೆಸರ ಉಚ್ಚರಿಸುತ್ತಾ, ಪತ್ರವನ್ನು
ಕಳುಹಿಸಬೇಕಾದ ನನ್ನ  ಆಜ್ಞೆಯನ್ನು ಮಾಡಿ
ಮುಗಿಸಿದಳು.

“ಇಳಂಚೆಶಿಯನ್…ಮೆಯಿಲ್ ಸೆಂಟ್.”

“ಗ್ರೇಟ್…ನಿನಗೆ ಇದಕ್ಕಾಗಿಯೇ ಟ್ರೀಟ್ ಕೊಡಬೇಕು. ಹೇಳು…ಎಲ್ಲಿ ಹೋಗೋಣಾ?”

ನಾನು ತೀವ್ರವಾಗಿರುವುದನ್ನು ಅರ್ಥ ಮಾಡಿಕೊಂಡು ಮೆಲ್ಲಗೆ ನಗುತ್ತಾ “ಸಂ ಅದರ್ ಡೇ”
ಎಂದಳು.

ಅವಳು ಹೇಳಿದ ಆ ಸಂ ಅದರ್ ಶುಭ ದಿನ ಆ ವಾರದ ಕೊನೆಗೇ ಬಂದಿತು.

ಬೆಸಂಟ್ ನಗರ್…. ಕಣ್ಣು ತುಂಬಾ ಸಮುದ್ರವೇ ಕಾಣುವಂತಿತ್ತು. ಆ ಕಾಫಿ ಶಾಪ್. ಸಮುದ್ರ, ಎರಡು ಆನೆಯ ಮುಂದೆ ಎಷ್ಟು ಸಮಯ ನಿಲ್ಲಲು
ಹೇಳಿದರೂ ನಿಂತುಬಿಡಬಹುದು. ಹಾಗೆ ಕುಳಿತುಕೊಂಡು ನೋಡುತ್ತಿದ್ದೆ.

ರಮ್ಯ ಸಮುದ್ರದ ಮಧ್ಯದಿಂದ ಎದ್ದು ಬರುವಂತೆ ಬಾಗಿಲನ್ನು ತೆರೆದುಕೊಂಡು ಬಂದಳು. 

“ಸಾರಿ ಬಾಸ್ … ಬಹಳ ಟ್ರಾಫಿಕ್.”

“ಅಬ್ಸಲ್ಯೂಟ್ಲಿ ನೋ ಇಶ್ಯೂಸ್. ನೀನು ಇನ್ನೂ ಸ್ವಲ್ಪ ತಡವಾಗೇ ಬಂದಿರಬಹುದಿತ್ತು. ಸಮುದ್ರ
ಇದೆಯಲ್ಲ ಅದನ್ನ ನೋಡ್ತಾ ಕೂತಿರ್ತಿದ್ದೆ.”

“ಹಾಗಾದ್ರೆ ನಾನು ಬೇಡ,
ಎದ್ಹೋಗಲಾ
?” – ಮುದ್ದಾಗಿ ಗೊಣಗಿ ಬಹಳ ಸುಂದರವಾಗಿ ಕಂಡಳು.

ಕೈಗಳನ್ನು ಉಜ್ಜುತ್ತಾ “ಕೆಪೂಚೀನಾ  ತಾನೇ?” ಎನ್ನುತ್ತಾ ಭುಜ ಕುಲುಕಿದಳು.

“ಅನ್ನ ಸಿಕ್ಕರೇ ತಿನ್ನಬಹುದು. ಇಲ್ಲೇನಂದರೆ ವಿಚಿತ್ರವಾಗಿ ಏನೇನೋ ತಿಳಿಯದೇ  ಇರೋದನ್ನೆಲ್ಲಾ  ಇಟ್ಟಿದ್ದಾರೆ” ಎಂಬ ನನ್ನ ಕಚ್ಚಾ ಮಾತುಗಳನ್ನು
ನಗುತ್ತಲೇ ಕೇಳುತ್ತ ತಲೆ ತೂಗಿದವಳ ಬಳಿ ಕೇಳಿದೆ. “ಅದೇನು ರಮ್ಯ ಕ್ರಿಸ್ಟಫರ್
? ಇಪ್ಪತ್ತೈದು ವರ್ಷಗಳ ಹಿಂದೆಯೇ ನಿಮ್ಮ ಅಮ್ಮನ
ಬಂಡಾಯನಾ
?

“ಹೌದು, ಯು ನೋ ….ನನ್ನ
ಅಮ್ಮಾನೂ ಅಪ್ಪಾನೂ ಸಖತ್ ಜೋಡಿ. ಅಪ್ಪನ ಕೈಯಲ್ಲೇ ಟಿವಿ ರಿಮೋಟ್ ಇರುತ್ತೆ. ಆದರೆ
, ಅಮ್ಮಾ ಹೇಳೋ ಚಾನೆಲ್ಲನ್ನ ಬದಲಾಯಿಸ್ತಾನೆ ಇರ್ತಾರೆ. ಅದೇ ತರಹ ಅವರಿಗೆ ಹಿಡಿಸುವ
ಹಾಡೋ ಸಿನಿಮಾನೋ ಬಂದರೆ…..
ಅಪ್ಪನ ಕರಿಯೇ
ಅಂತ ಅಮ್ಮ ಹೇಗೆ ಕಿರುಚ್ತಾರೆ ಗೊತ್ತಾ…

“ಲವ್ ಮೇರೆಜ್ ಒಂದೇ ಸಲ್ಯೂಷನ್ ಅಲ್ವಾ….ಜಾತಿ ಮತ ಎಲ್ಲವನ್ನೂ ತೊಲಗಿಸಬೇಕೆಂದ್ರೆ.”

“ನೋ ವೇ , ನೆವರ್ ನೆವರ್
ಬಾಸ್. ಅದರ ಮತ್ತೊಂದು ಮಗ್ಗುಲು ಬಹಳ ಕ್ರೂರವಾದದ್ದು. 
ಯಾವತ್ತಾದರೂ ಮಧ್ಯಾಹ್ನದ ಸಮಯದಲ್ಲಿ ಮನೆಗೆ ಹೋದರೆ
, ಅಮ್ಮನ
ಅಳು ಮುಖವನ್ನ ನೋಡಬೇಕಾಗುತ್ತೆ. ಏನೋ ಮಿಸ್ಸಿಂಗ್. ಒಂದು ಫೀಲಿಂಗ್ ಇರುತ್ತೆ ಅಂತ ಕಾಣುತ್ತೆ.
ನಿಮಗೆ ಅರ್ಥವಾಗೋ ಹಾಗೆ ಹೇಳಿದನಾ ತಿಳೀಲಿಲ್ಲ.”

“ಅರ್ಥವಾಯ್ತಾ?
ಅಂತ ಕೇಳೋ ಜಾಗದಲ್ಲಿ
ಅರ್ಥ ಹಾಗೋ ಹಾಗೆ ಹೇಳಿದ್ನಾ?’ ಅಂತ ಕೇಳ್ತಿದ್ದೀಯಾ. ಹಾಗೆಂದ್ರೆ ನೀನು ಫೇಸ್ ಬುಕ್ಕಲ್ಲಿ ಯಾರೋ ಸಾಹಿತಿಯನ್ನ ಫಾಲೋ
ಮಾಡ್ತಿದ್ದೀಯಾ.
ಮೌಲ್ಯ  ಗೊತ್ತಿರಬೇಕಲ್ಲಾ?”

ವಾತಾವರಣವನ್ನು ಮರೆತು ನಕ್ಕಳು.

“ಹೌದು ಬಾಸ್,
ಆಗಾಗ ಈ ರೀತಿ ಏನನ್ನಾದರೂ ಓದೋದು ಉಂಟು.”

“ನಿಮ್ಮ ಅಮ್ಮ ಯಾವುದನ್ನೋ ಕಳೆದುಕೊಂಡ ಫೀಲಿಂಗ್ ಅಂದ್ಯಲ್ಲಾ ಅವೆಲ್ಲಾ ಯಾವುದೂ  ಇಲ್ಲ. 
ಒಂದು ದೊಡ್ಡ ಬದಲಾವಣೆ ಅಷ್ಟೆ. ನೆಕ್ಸ್ಟ್ ಸ್ಟೆಪ್ ಅಂತ ಹೋಗುವಾಗ ಸಂಭವಿಸುವ ಸಣ್ಣ ನಷ್ಟ
, ಫೀಲಿಂಗ್ ಎಲ್ಲಾ ತಪ್ಪೇ ಅಲ್ಲ. ಅದಕ್ಕೆ
ಮೇನೇಜ್ಮೆಂಟ್ ಭಾಷೆಯಲ್ಲಿ
ಕೊಲೇಟರಲ್ ಡೇಮೇಜ್ ಅಂತ ಹೆಸರು. ಅಕ್ಸೆಪ್ಟ್ ಮಾಡಿಕೋಬಹುದು. ತಪ್ಪೇನೂ ಅಲ್ಲಾ.”

ಎರಡು ಕಾಫೀ ಕಪ್ಪುಗಳನ್ನು ಟೀಪಾಯಿಗೂ ಕಪ್ಪಿಗೂ ಹತ್ತಿರ ಬರದಂತೆ ನಾಜೂಕಾಗಿ ಇಟ್ಟು
ಹೋದಳು ಕಪ್ಪು ಸಮವಸ್ತ್ರ ಧರಿಸಿದ ಕಾಫೀ ಡೇ ಹೆಣ್ಣು. ಕಾಫಿಯ ಮೇಲೆ ಕ್ರೀಮಿನಿಂದ ಹಾರ್ಟ್ ಡಿಸೈನ್
ಮಾಡಿದ್ದರು. ಅದನ್ನು ಒಡೆಯದಂತೆ ಹೇಗೆ ಕುಡಿಯುವುದು ಎಂಬ ಕ್ಷಣಿಕ ಚಿಂತೆಯನ್ನು ಒದರಿ  ತುಟಿಗೆ ಅಂಟಿಸಿಕೊಂಡು
, ಹುಬ್ಬನ್ನು ಹಾಯಿಸಿದೆ.

ಅವಳು, “ನನಗೆ ನಿಮಗಿಂತ
ನಿಮ್ಮ ದನಿ ಬಹಳ ಹಿಡಿಸುತ್ತದೆ. ಐ ಮೀನ್ …ನೀವು ಮಾತಾಡೋ ರೀತಿ
,
ವರ್ಡಿಂಗ್ಸ್…”

ನನ್ನಿಂದ ಈಗ ಅವಳ ಬಳಿ ಐ ಲವ್ ಯೂ ಎಂದು ಹೇಳಲು ಸಾಧ್ಯ. ಹೇಳುವುದಕ್ಕೆ ಬೇಕಾದ
ತಯಾರಿಯೊಂದಿಗೆ ಬಂದಿದ್ದೇನೆ. ನಮ್ಮ ಕಾರ್ಯಾಲಯದಲ್ಲಿ ಬಹಳ ಹೆಂಗಸರು. ಎಲ್ಲರ ಬಳಿಯೂ ಯಾವುದಾದರೂ
ಒಂದು ವಿಷಯ ಆಕರ್ಷಕವಾಗಿರುತ್ತದೆ. ಆದರೆ
, ಇವಳ ಬಳಿ ಎಲ್ಲವೂ ಒಟ್ಟಾಗಿ
ರಾಶಿ ಬಿದ್ದಿದೆ. ನಾನು ಸಲಿಗೆಯಿಂದ ಮಾತನಾಡಿದರೂ ಅದನ್ನು ಬಳಸಿಕೊಂಡು
,
ಆಫೀಸಿನ ಕೆಲಸದಲ್ಲಿ ಅಡ್ವಾನ್ಟೇಜ್ ತೆಗೆದುಕೊಂಡಿಲ್ಲ. ಯಾವ ಕೆಲಸವನ್ನೂ ತಡಮಾಡಿಲ್ಲ. ಕೆಲಸದ
ಭರದಲ್ಲಿ ಉಂಟಾಗುವ ಕೋಪಗಳನ್ನೂ ಟೆಂಷನ್ಗಳನ್ನೂ ಅದರ ಹಾದಿಯಲ್ಲೇ ಎದುರಿಸಿ ಸಂಬಾಳಿಸುತ್ತಾಳೆ. ಎಲ್ಲಕ್ಕಿಂತ
ಹೆಚ್ಚಾಗಿ ಅವಳ ಬಳಿ ಇರುವ  ಸೆನ್ಸ್ ಆಫ್ ಹ್ಯೂಮರ್
, ಹೆಂಗಸರ ಬಳಿ ಅಪರೂಪವಾಗಿ ಕಾಣುವ ವಿಷಯಗಳಲ್ಲಿ ಅದೂ ಒಂದು. ಕೆಕ್ಕೆಕ್ಕೇ  ಅಂತ ಸುಮ್ಮ ಸುಮ್ಮನೆ ನಗುತ್ತಾರೆ ಅಥವಾ ಹಾಸ್ಯ ಎಂದರೆ
ಏನೆಂಬುದೇ ತಿಳಿಯದಂತೆ ಕಣ್ಣು ಕಣ್ಣು ಬಿಡುತ್ತಾರೆ. ಆದರೆ ಇವಳು  ಸಟೈರ್ಗಳನ್ನು ಗೌರವದೊಂದಿಗೆ ಅರ್ಥಮಾಡಿಕೊಂಡು ನಗುವವಳು.
ಮೇಲಿಂದ ಯಾರೋ ಒಬ್ಬ ದುರುಗುಟ್ಟಿ ನೋಡುತ್ತಿರುತ್ತಾನೆ ಎಂದೆನಲ್ಲಾ
,
ಅದು ಈಗ ನಡೆಯುತ್ತಿದೆ.

ನಾನು ಪ್ರೇಮವನ್ನು ಹೇಳಲು ಯತ್ನಿಸುತ್ತಿದ್ದಾಗ ಪ್ರಾರಂಭಿಸಿದಳು.

ಪ್ಚ್…ಆದರೆ ಒಂದು ಬಾಸ್. ಇದಕ್ಕೆ ಮೊದಲು ಇದ್ದ ಕಂಪನಿಗಳಲ್ಲಿ ನಿಮ್ಮ ಥರಾ ಯಾರೂ
ಇಲ್ಲ ಅಥವಾ ನನ್ನ ಕಣ್ಣಿಗೆ ಬಿದ್ದಿಲ್ಲ. ಒಬ್ಬ ಇದ್ದ… ಸ್ವಲ್ಪ ಓಕೆಯಾಗಿದ್ದ. ಮಾತನಾಡಿದಕೂಡಲೇ
ಪಟ್ಟಂತ
ಲವ್ ಮಾಡ್ತೀನಿ  ಅಂದುಬಿಟ್ಟ. ಇಡಿಯಟ್…”

ಅನಿಚ್ಛೆಯಿಂದ ಮೇಲೆ ನೋಡಿದೆ. ದುರುಗುಟ್ಟಿ ನೋಡುವ ಆ ದೇವರು ಕಾಣಿಸುತ್ತಿದ್ದಾನೆಯೇ?

“ಯಾಕಪ್ಪಾ…ನೀನು ಮಸ್ತಾಗಿದ್ದೀಯಾ, ಮಸ್ತಾಗಿ ಡ್ರೆಸ್ ಮಾಡ್ಕೊತೀಯ. ಲವ್ ಮಾಡದೆ ಏನು ಮಾಡ್ತಾನೆ,
ನನ್ನ ಪಕ್ಷದವನಂತ ಕಾಣುತ್ತೆ!” ಎಂದಾಗ
, ಕಾಫಿ ನೆತ್ತಿಗೆ
ಏರಿಬಿಡುವುದೇನೋ ಎಂಬಂತೆ ನಕ್ಕಳು.

ನಂತರ ಶಾಂತವಾಗಿ,
“ಹಾಗಿಲ್ಲ ಬಾಸ್. ಅವೆಲ್ಲಾ ತನ್ನಷ್ಟಕ್ಕೆ ನಡೀಬೇಕು. ಇಟ್ಸ್ ಲೈಕ್ ರೆಯ್ನಿಂಗ್. ಚೆನ್ನಾಗಿ
ಮಾತಾಡಿದ ಕೂಡಲೇ ಲವ್ ಆಗ್ಬಿಡುತ್ತೆ ಅಂದ್ರೆ
, ನಮ್ಮೂರಲ್ಲಿ ಯಾರು
ಚೆನ್ನಾಗಿ ಮಾತಾಡಲ್ಲ ಹೇಳಿ
?”

ಏನು ಉತ್ತರ ಕೊಡಬೇಕೆಂದು ಯೋಚಿಸುವುದಕ್ಕಿಂತ ಹಾಗೆಯೇ ಸುಮ್ಮನಿದ್ದುಬಿಡುವುದು
ಒಳ್ಳೆಯದು. ವೆಯಿಟ್ರೆಸ್ಸ್ ನ್ನು ನೋಡಿ ಗಾಳಿಯಲ್ಲಿ ಸಹಿ ಹಾಕುವಂತೆ ಗೆರೆ ಎಳೆದೆ. ಬಿಲ್ಲನ್ನು
ತಂದು ವಿನಯದಿಂದ ನೀಡಿದಳು.

ಒಳ್ಳೆಯದಾಯಿತು ಮಾರ್ಚ್ ತಿಂಗಳು ಬಂತು. ಆಡಿಟಿಂಗ್, ಇಯರ್ 
ಎಂಡಿಂಗ್ ಅಂತ ಆಫೀಸು ಹತ್ತಿ ಉರಿಯುತ್ತಿತ್ತು. ನಿಜವಾಗಲೂ ಕೆಲಸದಲ್ಲಿ
ತಲ್ಲೀನವಾಗಿಬಿಟ್ಟರೆ
, ಅದು ಮಿಕ್ಕೆಲ್ಲ ನೋವು, ಪ್ರೇಮ, ಸಮಸ್ಯೆ ಎಲ್ಲವನ್ನೂ ಮರೆಸಿ, ನಮ್ಮನ್ನು ಬೇರೊಂದು ಜಗತ್ತಿಗೆ ಕೊಂಡೊಯ್ದು ಬಿಡುತ್ತದೆ. ಹಾಗೆಯೇ ಆಯಿತು. ಕೆಲವು ಸಮಯ
ನಾನು ಕಿರುಚುವುದನ್ನು ನೋಡಿ
, ನನ್ನನ್ನು ಚಿಂಪಾಂಜಿ ಎಂದು ಸಹಾ ರಮ್ಯ
ಅಂದುಕೊಂಡಿರಬಹುದು. ಮಾತನಾಡುವುದು ಅಪರೂಪವಾಯಿತು. ಯಾವುದನ್ನು ಮುಟ್ಟಿದರೂ ಪ್ರಶ್ನೆಗಳು.
“ಆಡಿಟರ್ಗಳು ಹುಟ್ಟುವಾಗಲೇ ನರ್ಸಿನ ಬಳಿ
, ಯಾವ
ಸೂಜಿ ಚುಚ್ಚಿದ್ರಿ
?’ ಎಷ್ಟು ಎಂ ಎಲ್?’ ಎಂದು ಕೇಳುವ ಮಕ್ಕಳಾಗಿ ಹುಟ್ಟಿರಬಹುದೇ?” ಎಂದು ಆಡಿಟರ್
ಬಳಿಯೇ ಕೇಳಿದೆ.

ನಕ್ಕರು. ಯಾವ ಮುತ್ತನ್ನು ಉದುರಿಸಲಿಲ್ಲ.

ಹೇಗೋ ಎಲ್ಲವನ್ನು ಮುಗಿಸಿ, ನಾನು ಕಳುಹಿಸಬೇಕಾದ ವರ್ಷದ ವರದಿಯನ್ನು ತಯಾರಿಮಾಡಿ ಸಹಿಹಾಕಿ ಕಳುಹಿಸಲು ಹೇಳಿದ ಮೇಲೆಯೇ
ನಿಟ್ಟಿಸುರು ಬಿಟ್ಟೆ.

ಮಾರ್ಚ್ ಮುಗಿದ ದಣಿವೂ ಸರಿಯಾಗಿ ಯೋಜಿಸಿ ಟಾರ್ಗೆಟ್ ಮುಗಿಸಿದ ಉತ್ಸಾಹವೂ ಸೇರಿ, ಮಾರ್ಕೆಟಿಂಗ್ ಮತ್ತು ಅಕೌಂಟ್ಸ್
ಪ್ರಜೆಗಳೊಂದಿಗೆ ಜಲಕ್ರೀಡೆಗೆ ಹೊರಟುಬಿಟ್ಟೆ. ಬಾಬುವನ್ನು ಜತೆಯಾಗಿ ನನ್ನ ಬಲ ಪಕ್ಕದಲ್ಲಿ
ಕೂರಿಸಿಕೊಂಡೆ. ಎಡಗಡೆ ಉಪ್ಪಿನಕಾಯಿ ಇತ್ತು. ಮೊಬೈಲನ್ನು ಸ್ವಿಚ್ಆಫ್ ಮಾಡಿದ್ದರಿಂದ ಗುಣಮಟ್ಟದ
ಸಮಯ ಸಂತೋಷ ಆ ರಾತ್ರಿಯನ್ನು ತುಂಬಿ ತುಳಿಕಿಸಿತು.

ಮಾರನೆಯ ದಿನ ಬೇಗನೆ ಬಂದು ನನ್ನ ಕೇಬಿನಿನಲ್ಲಿ ಕುಳಿತಿದ್ದೆ. ಯಾಕೋ ನನ್ನ ಒಳಮನಸ್ಸು
ಅಳುಕುತ್ತಿತ್ತು.   ನಾನು ಅಂದುಕೊಂಡಂತೆಯೇ ಬಹಳ
ದೊಡ್ಡ ತಪ್ಪೊಂದನ್ನು ಮಾಡಿದ್ದೆ. ನನಗಿರುವ ಒಂದು ಅಭ್ಯಾಸ
, ಯಾರಿಗಾದರೂ ಮುಖ್ಯವಾದ ಮೆಯಿಲ್ ಕಳುಹಿಸಿದರೆ ಮಾರನೆಯ ದಿನ ಸೆಂಡ್
ಮೆಯಿಲ್ ಬಾಕ್ಸಿಗೆ ಹೋಗಿ ಒಮ್ಮೆ ಓದಿನೋಡುವುದು. ವರದಿಯನ್ನು ಕೊರಿಯರ್ ಮಾಡಲು ಹೇಳಿದ್ದರಿಂದ
, ಡೆಸ್ಕ್ ಟಾಪಿನಲ್ಲಿದ್ದ ಡಾಕ್ಯುಮೆಂಟಿನ ಮೇಲೆ ಕಣ್ಣಾಡಿಸುತ್ತಿದ್ದೆ. ಬ್ಲಂಡರ್ ಅಂತಾರಲ್ಲಾ ಅಂಥಾ ತಪ್ಪನ್ನು ಮಾಡಿದ್ದೆ. ಕೋಟಿಗಳು ಎಂದು ಮೇಲೆ ಗುರುತು ಹಾಕಬೇಕಾದ ಎಲ್ಲಕಡೆ ಲಕ್ಷ ದಲ್ಲಿ ಹಾಕಿ ಗೊಂದಲಮಾಡಿಟ್ಟಿದ್ದೆ. ನನ್ನಿಂದ ಇಂತಹ
ಒಂದು ತಪ್ಪು ನಡೆದಿದೆ ಎಂದು ನಾನೇ ಒಪ್ಪಿಕೊಂಡರೂ ಮೇಲಿನ ಅಧಿಕಾರಿಗಳು ಒಪ್ಪಿಕೊಳ್ಳುವುದಿಲ್ಲ.
ನನ್ನ ಮೇಲೆ ಹಾಗೊಂದು ನಂಬಿಕೆ. ಅದನ್ನು ಕೆಡವುವುದು ಆತ್ಮಹತ್ಯೆಗೆ ಸಮ. ಹಪಾಹಪಿ. ಯಾವಾಗಲೂ
9.30ಕ್ಕೆ ಬಂದುಬಿಡುವ ರಮ್ಯ ಅಂದು 9.35 ಆದರೂ ಬಂದಿರಲಿಲ್ಲ. ನನ್ನ ಎಲ್ಲ ಅಸಮರ್ಥತತೆ ಅವಳ ಮೇಲೆ
ಕೋಪವಾಗಿ ಬದಲಾಗುತ್ತಿತ್ತು.

ತಲೆಮೇಲೆ ಕೈಯಿಟ್ಟು ಕುಳಿತುಬಿಟ್ಟೆ. ಹೇಗೂ 12 ಗಂಟೆಗೆ ಕೊರಿಯರ್ ತಲುಪಿ ಬಿಡುತ್ತದೆ.

ಗಂಟೆ 10.

ರಮ್ಯ ಉತ್ಸಾಹದಿಂದ ಬಂದು “ಗುಡ್ ಮಾ…” ಎಂದು ಹೇಳಿ ಮುಗಿಸುವ ಮುನ್ನ, ನನ್ನ ಅವಸ್ಥೆ ನೋಡಿ “ಹೋಪ್ ಯೂ ಆರ್ ಆಲ್ರೈಟ್
ಬಾಸ್
?” ಎಂದಳು.

ನನ್ನ ಅತೀ ಸ್ವಾಭಿಮಾನದಿಂದ ನನ್ನ ತಪ್ಪನ್ನು ಇವಳ ಬಳಿ ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ.
ಯಾವ  ಭಾವನೆಗಳನ್ನು ತೋರಿಸಿಕೊಳ್ಳದೆ ಅವಳನ್ನು
ನೋಡಿದೆ.

“ನಿನ್ನೆ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸರಿ, ಪಾರ್ಟಿ ಮೂಡಲ್ಲಿದ್ದೀರಾಂತ ಡಿಸ್ಟರ್ಬ್
ಮಾಡಲಿಲ್ಲ” – ಎಂದು ಹೇಳುತ್ತಲೇ ಕೊರಿಯರ್ ಮಾಡಬೇಕಾದ ಕವರನ್ನು ತನ್ನ ಡ್ರಾದಿಂದ ತೆಗೆದುಕೊಂಡು
ಬಂದಳು.

ಒಂದು ಕ್ಷಣ ನಾನು ತಮಿಳು ಸಿನಿಮಾ ನಟ ಪೂರ್ಣಮ್ ವಿಶ್ವನಾಥನ್ ಹಾಗೆ ಅಮ್ಮಾ ಮಹಾತಾಯಿ…
ಎಂದು ಮನಸ್ಸಿನೊಳಗೆ ಹೇಳಿಕೊಳುತ್ತಾ  ಅವಳನ್ನು
ನೋಡಿದೆ.

ಸಂ ತಿಂಗ್ ರಾಂಗ್ ಬಾಸ್ ಇದರಲ್ಲಿ…..ನಂಬರ್ಸ್ ಎಲ್ಲಾ ಕೆಲವು ಕಡೆ ಲಕ್ಷದಲ್ಲಿ ಕೆಲವು
ಕಡೆ…..” ಎಂದು ಹೇಳಲು ಹೋದವಳನ್ನು ತಡೆದು
, “ರಮ್ಯ, ಒಂದು ಕೆಲಸ ಮಾಡು, ಜಸ್ಟ್ ಗೆಟ್ ಅವುಟ್ ಆಫ್ ದ ಆಫೀಸ್ ರೈಟ್
ನೌ. ಕಾರ್ನರ್ ಕಾಫಿ ಡೇನಲ್ಲಿ ವೈಟ್ ಮಾಡು. ಒಂದು ಇಂಪಾರ್ಟಂಟ್ ವಿಷಯ ಮಾತನಾಡಬೇಕು.”

ಅವಳು ಕಸಿವಿಸಿಯಿಂದ ನನ್ನ ಮುಖ ನೋಡಿ ಕವರನ್ನು ಕೊಟ್ಟು ಹೋದಳು. ನಾನು ಆ ಕವರನ್ನು ಯಾರೂ
ನೋಡದ ಹಾಗೆ ಮುಟ್ಟಿ ನಮಸ್ಕಾರ ಮಾಡಿ
, ಹರಿದು ಕಸದಬುಟ್ಟಿಗೆ ಹಾಕಿದೆ.

ಕಾರನ್ನು ತೆಗೆದುಕೊಂಡು ಅವಳ ಮುಂದೆ ನಿಂತು ಹತ್ತಲು ಹೇಳಿದೆ .  ಗಡಿಬಿಡಿಯಲ್ಲಿ ಹತ್ತಿದಳು.

“ಏನಾಯ್ತು,
ಎನಿ ಇಶ್ಯೂ
? ನಿಮ್ಮ ಮುಖಾನೇ ಸರಿ ಇಲ್ಲವಲ್ಲಾ!”

ನಾನು ಏನನ್ನೂ ಮಾತನಾಡದೇ ಕಾರನ್ನು ಓಡಿಸುತ್ತಿದ್ದೆ. ಊರ ಗಡಿಯನ್ನು ಧಾಟಿ ಈ.ಆರ್.ಸಿ.
ಕಡೆ ಹಾರಿತು ತಗಡಿನ ಕುದುರೆ.

“ರಮ್ಯ, ಹೇಗೆ ಥ್ಯಾಂಕ್ಸ್
ಹೇಳೋದೂಂತಾನೇ ಗೊತ್ತಿಲ್ಲ. ನೀನು ಮಾತ್ರ ನೋಡದೆ
, ಉಳಿದವರು ನೋಡಿದ್ದರೆ, ಕೊರಿಯರ್ ಕಳಿಸೋದಿಕ್ಕೆ ಹೇಳಿದ್ರು, ಕವರಿಗೆ ಹಾಕಿ  ಕಳಿಸೋಣಾ ಅಂತ ಕಳುಹಿಸುತಿದ್ರೆ ಹೊರತು….. ನನ್ನ ಮರ್ಯಾದೇ ಹೋಗ್ತಿತ್ತು.

“ಬಾಸ್, ಸಿಲ್ಲಿ ಮೇಟರ್.
ನೀವು ಎಷ್ಟು ಕ್ಲಿಯರ್ ಆಗಿ ಕೆಲಸ ಮಾಡ್ತೀರಾ ಅಂತ ಎಲ್ಲರಿಗೂ ಗೊತ್ತು. ಇಟ್ ಇಸ್ ಜಸ್ಟ್ ಆನ್
ಎರರ್.”

“ಅದೇಯಾವಾಗಲೂ ತಪ್ಪು
ಮಾಡೋನು ತಪ್ಪು ಮಾಡಿದರೆ
, ನಲ್ಲಿಯಲ್ಲಿ ಈವತ್ತು ನೀರು ಬರ್ತಿಲ್ಲಾ
ಅನ್ನೋ ಥರಾ ಸುಮ್ನೆ ಹೊರಟೋಗ್ತಾರೆ. ನಂಬಿಕೆಯನ್ನು ಕೆಡವೋ ಹಾಗೆ ದಿಢೀರಂತ ತಪ್ಪು ಮಾಡೋವಾಗಲೇ
, ತಪ್ಪು ಮಾಡಿದವರಿಗಾಗಲಿ, ರಿಸೀವ್ ಮಾಡಿದವರಿಗಾಗಲಿ, ಈಸಿಯಾಗಿ ತೆಗೆದುಕೊಳ್ಳೋದಿಕ್ಕೆ ಆಗೋದಿಲ್ಲ. ತುಂಬಾ ದೊಡ್ಡದಾಗಿ ಕಾಣುತ್ತೆ. ಹೀಗೆ
ಮಾಡಿಬಿಟ್ಟನಲ್ಲಾಂತ ನಾವೂ
, ಇವನನ್ನ ನಂಬಿ ಕೊಟ್ಟವಲ್ಲಾಂತ ಅವರೂ
ಆಲೋಚಿಸೋದಿದೆಯಲ್ಲಾ…ಅದು ನಿಧಾನವಾಗಿ ದೊಡ್ಡದಾಗಿ ರೂಪ ತಾಳುತ್ತೆ.”

ನಾನು ಮಾತನಾಡುತ್ತಾ ಇರುವಾಗ ಅವಳು ನನ್ನನ್ನೇ ನೋಡುತ್ತಿದ್ದಳು.

“ಹಾಗಾದ್ರೆ ಬರೀ ಥ್ಯಾಂಕ್ಸ್ ಎಲ್ಲಾ ಸಾಲದು. ಮಸ್ತ್ ಡ್ರೈವ್ ಕರೆದುಕೊಂಡು ಹೋಗಿ.
ಲಾಲಾಲಾಲಾಲಾಂಗಾಗಿ…” ಅವಳು ಎಳೆದ
ಲಾ ಸುಮಾರು 40ಕಿ.ಮೀ. ಎಂಬ ಅರ್ಥ
ನೀಡಿತು. ಈ ಸಲ ಮೇಲಿಂದ ದುರುಗುಟ್ಟಿ ನೋಡುವ ಆಸಾಮಿ ನನಗೆ ಸಾಧಕವಾಗಿ ಒಂದು ಕೆಲಸ ಮಾಡಿದ.

ಎಫ್.ಎಂ-ನಲ್ಲಿ, ಕಣ್ಮಣಿ ನಿನ್ನ ಬರುವಿಗಾಗಿ ಕಾದಿದ್ದೆ…” ಹಾಡು. ಆ ಹಾಡು ಬರುವವರೆಗೆ ಇದ್ದ ಮನಸ್ಥಿತಿ, ಪೂರ್ತಿಯಾಗಿ ಬದಲಾದಂತೆ ರಮ್ಯ, “ಅಯ್ಯೋ….ನಮ್ಮ ಅಪ್ಪನಿಗೆ
ಈ ಹಾಡೂಂದ್ರೇ ಪ್ರಾಣ ಬಿಡ್ತಾರೆ” ಎಂದಳು.

ಹೌದು…ನಮ್ಮನ್ನು ಮರೆತು ಪ್ರಾಣವನ್ನು ಕೊಡುವಂತಹ ಹಾಡೇ. ಆಸೆಯಿಂದ ಮಾತನಾಡಬೇಕು ಬರಲೇ… ಬರಲೇ ಎಂಬ ಜಾಗದಲ್ಲಿ ಬರಲೇ?’ ನಲ್ಲಿ
ಕರಗುವ ಜೇಸುದಾಸ್ ಕೊಟ್ಟ ಧೈರ್ಯದಲ್ಲಿ
, ರಮ್ಯಳ ಕೈಯನ್ನು ಅದುಮಿ
ಹಿಡಿದು ತೆಗೆದೆ.

“ಆತ್ಮ ವಿಶ್ವಾಸದ ಬಗ್ಗೆ ಬುಕ್ಸ್ ಓದೋರಲ್ಲಾ ಹೀಗೆ ಬಾಸ್. ಕೈ ಕೊಡೋವಾಗಲೇ ಇಂಪ್ರೆಸ್
ಮಾಡ್ತೀವಂತ ಅದುಮಿ ಛೇ!” ಎಂದು ತನ್ನ ಕೈಯನ್ನು ಒದರಿ ನಕ್ಕಳು.

ಮೃದುವಾಗಿಯೂ ಹಿಡಿಯಲು ಗೊತ್ತು ಎಂಬಂತೆ ಹಿಡಿದುಕೊಂಡೆ.

ಬಾಬು ನನ್ನನ್ನು ಫೋನಿನಲ್ಲಿ ಕರೆದು, “ರಮ್ಯ ರಜೆ ಹೇಳಿದ್ದಾರಾ  ಸಾರ್?” ಎಂದ.

“ಹೇಳ್ತಾನೆ ಇದ್ದಾರೆ” ಎಂದು ನಾನು ಹೇಳಿದ್ದು, ಬಾಬುವಿಗೆ ಅರ್ಥವಾಗಿರುವುದಿಲ್ಲ ಎಂದು ನನಗೆ ಗೊತ್ತು.

ಆ ಡ್ರೈವ್ ಕೊಟ್ಟ ಗೆಲುವಿನಲ್ಲಿ ಅಂದು ಸಂಜೆ ಸರಿಯಾದ ವರದಿಯನ್ನು ಕಳುಹಿಸಿಬಿಟ್ಟು, “ಹೊರಡ್ತೀನಿ ಬಾಸ್” ಎಂದವಳ ಬಳಿ “ಥ್ಯಾಂಕ್ಸ್”
ಎಂದೆ.

ನಾನು ಯಾವಾಗಲೂ ಜಂಬದಿಂದ, ಸಂಪ್ರದಾಯಕ್ಕಾಗಿ ಧನ್ಯವಾದ ಹೇಳುವವನು. ಆದರೆ, ರಮ್ಯಳ ಬಳಿ
ಈಗ ನಾನು ಹೇಳಿದ ಥ್ಯಾಂಕ್ಸ್ ಮನಸ್ಸಿನ ಆಳದಿಂದ ಬಂದಿತ್ತು.

ಚೆನ್ನೈ ಅಂತಹ ಮಳೆಯನ್ನು ನೋಡಿರಲಿಲ್ಲ ಎಂಬಂತೆ ಒಂದು ಮಳೆಯ ದಿನ ಬೆಳಗ್ಗೆ 10 ಗಂಟೆಗೆ ಹೊರಗೆ ಕರಿಕತ್ತಲು.  ಅಂತಹ ದಿನದಲ್ಲೂ ನಾಲಿಗೆಯನ್ನು ಹೊರಹಾಕಿಕೊಂಡು
ನಿಷ್ಠೆಯಿಂದ ಕೆಲಸ  ಮಾಡುತ್ತಿದ್ದ ಬಾಬುವಿನ
ತೋಳುಗಳನ್ನು ಮುಟ್ಟಿ
, “ಮಸ್ತ್ ಕ್ಲೈಮಟ್ ಅಲ್ಲಾ?” ಎಂದೆ. ಅವನು “ಹೌದು ಸಾರ್” ಎಂದು ಹೇಳುತ್ತಲೇ ಕ್ಯಾಲಿಕ್ಯೂಲೇಟರನ್ನು ತೆಗೆದು ಏನೋ
ಮಾಡುತ್ತಿದ್ದ.

ನಾನು ರಮ್ಯಳನ್ನು ಹುಡುಕಿದೆ. ಕಿಟಿಕಿಯ ಪಕ್ಕ ನಿಂತು ಮಳೆಯನ್ನು ನೋಡುತ್ತಿದ್ದಳು.
ಆಫೀಸಿನಲ್ಲಿ ಅರ್ಧ ಜನ ಹೊರಗೆ ನಿಂತಿರುವುದು
, ಒಳಗೆ ಅರ್ಧಗೋಳಾಕಾರದಲ್ಲಿ ನಿಂತು ಮಳೆಯ ದಿನಕ್ಕೆ ನೀಡಬೇಕಾದ ಮರ್ಯಾದೆಯನ್ನು
ಸಲ್ಲಿಸುತ್ತಿದ್ದರು.

“ಒಂದು ಡ್ರೈವ್ ಹೋದರೆ ಸೂಪ್ಪರಾಗಿ ಇರುತ್ತಲ್ಲಾ? ಪ್ಚ್! ಆದರೆ, ಕೆಲಸ ಇದೆ” ಎಂದು
ಹೇಳುತ್ತಲೇ ರಮ್ಯಳ ಪಕ್ಕದಲ್ಲಿ ನಿಂತು
, ಬಗ್ಗಿ ಆಕಾಶವನ್ನು ನೋಡಿದೆ. ನನ್ನ ಕೈಯಲ್ಲಿ ಹಬೆಯಾಡುವ ಟೀ ಅದರಿಂದ ಹೊಮ್ಮುವ ಶುಂಟಿಯ ವಾಸನೆ
ನನಗೆ ಬಹಳ ಹಿಡಿಸಿತು.

“ನಿಮ್ಮ ಕಾರ್ ಕೀಲಿಯನ್ನು ಕೊಡಿ…ನಾವು ಬೇಕಾದರೆ ಹೋಗುತ್ತೇವೆ” ಎಂದಳು.

ಕೆಲವು ಪ್ರಶ್ನೆಗಳನ್ನು ಉತ್ತರ ಅಪೇಕ್ಷಿಸಿ ಕೇಳುವುದಿಲ್ಲ. ಹಾಗೆಯೇ ಕೆಲವು ಉತ್ತರಗಳು
ಪ್ರಶ್ನೆಗಳಿಗಾಗಿಯೂ ಅಲ್ಲ.

ನಗುತ್ತಲೇ ನನ್ನ ಜಾಗದ ಕಡೆ ನಡೆದೆ. ವಾಟ್ಸ್ ಅಪ್ ಸುದ್ದಿ ಕಾಣಿಸಿತು.

ಈವರೆಗೆ ರಮ್ಯ ನನಗೆ ವಾಟ್ಸಪ್ ನಲ್ಲಿ ಕಳುಹಿಸಿದ ಸುದ್ದಿಗಳೆಲ್ಲಾ ಕೆಲಸಕ್ಕೆ
ಸಂಬಂಧಪಟ್ಟದ್ದು.  ಆದರೆ ಈ ಸಲ ನೋಟಿಫಿಕೇಶನ್
ಬರುವಾಗಲೇ ಒಳಮನಸ್ಸು ಒಂದು ಭಾವನೆಗೆ ಸಿದ್ದವಾಯಿತು.

I kept one small box on your left.”

ನಾನು ತಕ್ಷಣ ಎಡ ಪಕ್ಕಕ್ಕೆ ನೋಡಲಿಲ್ಲ. ಬದಲಾಗಿ, ರಮ್ಯಳನ್ನು ನೋಡಿದೆ. ನನಗೆ ಬೆನ್ನು ತೋರಿಸುತ್ತ ಕಿಟಕಿಯಲ್ಲಿ  ಮಳೆಯನ್ನು ನೋಡುತ್ತಾ ನಿಂತಿದ್ದಳು.

ಎಡಗಡೆ ಇದ್ದ ಸಣ್ಣ ರಟ್ಟಿನ ಪೆಟ್ಟಿಗೆಯನ್ನು ಬಿಚ್ಚಿದೆ. ಮತ್ತೆ ವಾಟ್ಸಪ್.

“ರಬ್ಬರ್ ಚೆಂಡಾದ ನಾನು, ಇನ್ನು…” ಎಂದು ಚುಕ್ಕಿಗಳನ್ನು ಇಟ್ಟಿದ್ದಳು.

ಪೆಟ್ಟಿಗೆಯೊಳಗೆ ನೋಡಿದೆ. ಸುಂದರವಾದ ಗಾಜಿನ ಚೆಂಡು. ಬಲಗೈನಲ್ಲಿ ಹಿಡಿದುಕೊಂಡು ಎಡ
ಹೆಬ್ಬಟ್ಟನ್ನು ಎತ್ತಿ ತೋರಿಸಿದೆ. ಅರ್ಧ ಕ್ಷಣ ಕೆನ್ನೆ ಕೆಂಪಾಗುವಂತೆ ನಕ್ಕಳು
, ಮತ್ತೆ ತಿರುಗಿ ಮಳೆ ಸುರಿಸುವ ಆಕಾಶದ ಕಡೆ
ನೋಡಿದಳು!

                                                                   
***

 நன்றி திரு கே.நல்லதம்பி

மொழிபெயர்ப்பாளர். 

 

 

 

 

 

 

 

 

 

 

RELATED ARTICLES

LEAVE A REPLY

Please enter your comment!
Please enter your name here

இவ்வகை

ஓவியம்

சிற்பம்

குழி